ಕುಡಿದ ಅಮಲಿನಲ್ಲಿ ರಕ್ತಸ್ರಾವ : ಮಲಗಿದಲ್ಲಿಯೇ ಸಾವು!
ತೀರ್ಥಹಳ್ಳಿ : ಅತೀ ಹೆಚ್ಚಾಗಿ ಕುಡಿದ ಪರಿಣಾಮ ವ್ಯಕ್ತಿಯೋರ್ವ ಮಲಗಿದಲ್ಲಿಯೆ ಸಾವನ್ನಪ್ಪಿದ
ಘಟನೆ ಪಟ್ಟಣದ ಸೊಪ್ಪುಗುಡ್ಡೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇಂದಿರಾನಗರ ನಿವಾಸಿ ನರಸಿಂಹ (೪೫ ವರ್ಷ) ಸಾವನ್ನಪ್ಪಿದ್ದ ವ್ಯಕ್ತಿ. ಈತ ಪಟ್ಟಣದಲ್ಲಿ ಕೆಲಸಕ್ಕಾಗಿ
ಎಲ್ಲಡೆ ಓಡಾಡಿಕೊಡು ಕೆಲವೆಡೆ ಕೆಲಸ ನಿರ್ವಹಿಸುತ್ತಿದ್ದ. ಆದರೆ ಭಾನುವಾರ ಸಂಜೆ ಕುಡಿದಿದ್ದ.
ಕುಡಿದಿದ್ದು ಹೆಚ್ಚಾಗಿ ರಕ್ತಸ್ತ್ರಾವಗೊಂಡು ಸಾವನ್ನಪ್ಪಿದ್ದಾನೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.