ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ
ಹುನಗುಂದ : ಪಟ್ಟಣದಿಂದ ಕೇವಲ ೧೦ ಕಿಲೋ ಮೀಟರ್ ಅಂತರದಲ್ಲಿರುವ ಚಟ್ನಿಹಾಳ ಗ್ರಾಮಕ್ಕೆ ಹುನಗುಂದ ಘಟಕದಿಂದ ಯಾವುದೇ ಬಸ್ಸುಗಳ
ಸೌಕರ್ಯ ಇರದ ಕಾರಣ ಹುನಗುಂದ ಪಟ್ಟಣದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಚಟ್ನಿಹಾಳ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ
ಒದಗಿಸಿಕೊಡುವಂತೆ ಶಾಸಕ ವಿಜಯಾನಂದ ಕಾಶಪ್ಪನವರಿಗೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮನವಿ ಮಾಡಿದರು.
ಹುನಗುಂದ ಘಟಕದಿಂದ ಅಮರಾವತಿ ನಿಡಸನೂರ ಮಾರ್ಗವಾಗಿ ಕರಡಿ ಮತ್ತು ಕೋಡಿಹಾಳ ಗ್ರಾಮಕ್ಕೆ ತೆರಳುವ ಬಸ್ಸುಗಳನ್ನು
ನಿಡಸನೂರಿಂದ ಕೇವಲ ೨ ಕೀ.ಮಿ ಅಂತರದಲ್ಲಿರುವ ಚಟ್ನಿಹಾಳ ಗ್ರಾಮಕ್ಕೆ ವಾಯಾ ಮಾಡಿಕೊಂಡು ಹೋಗುವಂತೆ ಕೋರಿ ಚಟ್ನಿಹಾಳ
ಗ್ರಾಮಸ್ಥರು ಮತ್ತು ಕರ್ನಾಟಕ ಯುವರಕ್ಷಣಾ ವೇದಿಕೆಯ ಸಹಯೋಗದಲ್ಲಿ ಶಾಸಕರಿಗೆ ಮತ್ತು ಹುನಗುಂದ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಂಬಲದಿನ್ನಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗ್ಯಾನಪ್ಪ ಮೂಲಿಮನಿ,ಸದಸ್ಯರಾದ ಸೋಮಪ್ಪ ಬೇಗಾರ್
ಮಾಜಿ ಸದಸ್ಯರಾದ ಗ್ಯಾನಪ್ಪ ಮೂಲಿಮನಿ, ರಮೇಶ್ ಪೂಜಾರಿ, ಮತ್ತು ಮಾಜಿ ಪಿಕೆಪಿಎಸ್ ಸದಸ್ಯರಾದ ರಾಮಪ್ಪ ಕಮರಿ ಮತ್ತು
ಚಟ್ನಿಹಾಳ ಗ್ರಾಮದ ಮುಖಂಡರಾದ ಬಸವರಾಜ ಪೂಜಾರಿ,ರಾಮಪ್ಪ ತಳವಾರ್,ಶರಣಪ್ಪ ಕುರಿ,ಮತ್ತು ಕರ್ನಾಟಕ ಯುವರಕ್ಷಣಾ
ವೇದಿಕೆಯ ತಾಲ್ಲೂಕಾ ಉಪಾಧ್ಯಕ್ಷ ನಿರುಪಾದಿ ನಾಯಕ್ ಮತ್ತು ತಾಲ್ಲೂಕಾ ಕಾರ್ಯದರ್ಶಿ ಯಮನೂರ್ ಪುಣೆ ಇದ್ದರು.