ಸಿ.ಎ.ಎ. ಕಾನೂನು ಹಿಂಪಡೆಯಲು ಒತ್ತಾಯಿಸಿ : ಎಸ್ಡಿಪಿಐ ಪ್ರತಿಭಟನೆ.
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಎಸ್ ಆರ್ ಕಂಠಿ ವೃತ್ತದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಸಿಎಎ ಕಾನೂನು ಹಿಂಪಡೆಯಲು ಒತ್ತಾಯಿಸಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುವಾರದಂದು ರಾತ್ರಿ ೧೦ ಗಂಟೆಗೆ ಪ್ರತಿಭಟನೆಯನ್ನು ನಡೆಸಿದರು.
ರಾಜ್ಯ ಸಮಿತಿ ಸದಸ್ಯರಾದ ರಮಜಾನ ಕಡಿವಾಲ ಉಪಾಧ್ಯಕ್ಷರಾದ ನಬಿ ವಾಲಿಕಾರ, ಚೌದ್ರಿ, ಮುಫ್ತಿ ಇರ್ಫಾನ್ ವೆಂಕಟಾಪುರ, ಇಳಕಲ್ ನಗರ ಘಟಕ ಅಧ್ಯಕ್ಷ ಮೆಹಬೂಬ್ ನೇವಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ೧೫೦ ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.