The festive Kalikadevi palanquin festival ಸಂಭ್ರಮದ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ

WhatsApp Group Join Now
Telegram Group Join Now
Instagram Group Join Now
Spread the love

The festive Kalikadevi palanquin festival ಸಂಭ್ರಮದ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ

festive Kalikadevi  ಸಂಭ್ರಮದ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ

ಇಳಕಲ್ಲ : ನಗರದ ವಿಶ್ವಕರ್ಮ ಸಮಾಜದ ವತಿಯಿಂದ ಕಾಳಿಕಾ ದೇವಸ್ಥಾನದ ೬೫ನೇ ವಾರ್ಷಿಕೋತ್ಸವ ಮತ್ತು ಶ್ರೀ ಮೌನೇಶ್ವರ ಹಾಗೂ ನವಗ್ರಹಗಳ ಪ್ರತಿಷ್ಠಾಪನಾ ೪೦ ನೇ ವಾರ್ಷಿಕೋತ್ಸವÀ, ಯುಗಾದಿ ಮಹೋತ್ಸವ ಪ್ರಯುಕ್ತ ಸಕಲ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿAದ ಪಲ್ಲಕ್ಕಿ ಉತ್ಸವ ಹಾಗೂ ಕಾಳಿಕಾ ದೇವಿ ಭಾವಚಿತ್ರ ಮೆರವಣಿಗೆ ಬುಧವಾರ ಜರುಗಿತು.

ಶ್ರೀ ವಿಶ್ವಕರ್ಮ ಕಾಳಿಕಾ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಾದ ೧೦ ನೇ ನಂ ಶಾಲೆ, ಪೋಲೀಸ್ ಮೈದಾನ, ಗಾಂದೀ ಚೌಕ್ ತಲುಪಿ, ಗ್ರಾಮ ಚಾವಡಿ, ಎಸ್.ಆರ್.ಕಂಠಿ ವೃತ್ತದಿಂದ ಮಹಾಂತೇಶ ಚಿತ್ರಮಂದಿರ ಮಾರ್ಗವಾಗಿ ಮರಳಿ ದೇವಸ್ಥಾನ ತಲುಪಿತು.

ಪಲ್ಲಕ್ಕಿ ಉತ್ಸವದಲ್ಲಿ ಸಮಾಜದ ಮುಖಂಡರಾದ ವೀರಭದ್ರಪ್ಪ ಪತ್ತಾರ (ಹಿಪ್ಪರಗಿ), ರಾಮಣ್ಣ ಮರೋಳ, ಮುತ್ತಣ್ಣ ಕಿಲ್ಲೇದ, ಜಗದೇವ ಮರೋಳ, ಜಿತೇಂದ್ರ ಬಡಿಗೇರ, ಆನಂದ ಅರ್ಕಸಾಲಿ, ನಾರಾಯಣ ಹೂಲಗೇರಿ, ಮೌನೇಶ ನಾಲತವಾಡ, ಕಾಳಪ್ಪ ಪತ್ತಾರ, ಶ್ರೀಧರ ಜೀ. ಬೆಂತೂರ ಶ್ರೀ ವಿಶ್ವಕರ್ಮ ತರುಣ ಸಂಘದ ಸದಸ್ಯರು ಮತ್ತು ಶ್ರೀ ಕಾಳಿಕಾದೇವಿ ಮಹಿಳಾ ಮಂಡಳಿ ಸದಸ್ಯರು, ಯುವಕರು ಇದ್ದರು.


Spread the love

Leave a Comment

error: Content is protected !!