
Hazrat Tipu Sultan ಇಳಕಲ್ದ ಹಜರತ್ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಜಯಂತಿ ಆಚರಣೆ
ಇಳಕಲ್ಲ : ನಗರದ ದರ್ಗಾ ಸಮೀಪದ ಹಜರತ್ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರು ಟಿಪ್ಪು ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಶಬ್ಬೀರ ಬಾಗವಾನ್, ಅಬ್ದುಲ್ ರಜಾಕ್ ಹಳ್ಳಿ, ಅಹಮದ್ ಬಾಗವಾನ್ (ಕಂಡಕ್ಟರ್), ಹುಸೇನ್ ಬಾಗವಾನ್, ರಫೀಕ್ ಐಹೊಳೆ, ವಾಸಿಂ ಜಾಗೀರ್ದಾರ್, ಮೆಹಬೂಬ್ ಗೋಡೆಕರ್, ಮೆಹಬೂಬ್ ಗದ್ವಾಲ್, ಮುರ್ತುಜಾ ಚಳಗೇರಿ, ಅಬ್ಬಾಸ್ ಬಾಗವಾನ್ ಸೇರಿದಂತೆ ಸಮಾಜದ ಹಲವು ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು. ವರದಿ : ಭೀಮಣ್ಣ ಗಾಣಿಗೇರ





