
Drinking water ಇಳಕಲ್‌ಗೆ ಇನ್ನೂ ಬಾರದ ಕುಡಿಯುವ ನೀರು : ನಗರಸಭೆಯಿಂದ ಟ್ಯಾಂಕರ್ ನೀರು ಪೂರೈಕೆ
ಇಳಕಲ್ಲ: ಆಲಮಟ್ಟಿ ಜಲಾಶಯದ ಜಾಕ್‌ವೆಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಳಕಲ್ಲ ನಗರಕ್ಕೆ ಸರಬರಾಜಾಗುತ್ತಿದ್ದ ೨೪*೭ ಕುಡಿಯುವ ನೀರಿನ ಪೂರೈಕೆ ಕಳೆದ ೧೧ ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಹನಿ ನೀರಿಗೂ ಪರದಾಡುವಂತಾಗಿದೆ.
ನಗರದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿರುವುದರಿAದ, ನಗರದ ಪ್ರಮುಖ ಮುಖಂಡರು ಹಾಗೂ ಮುಂಬರುವ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳು ವಿವಿಧ ವಾರ್ಡ್ಗಳಿಗೆ ಖಾಸಗಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಿ ಜನರ ದಾಹ ತೀರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ವಾರ್ಡ್ಗಳಿಗೆ ಟ್ಯಾಂಕರ್ ಬರುತ್ತಿದ್ದಂತೆ ನೀರು ಹಿಡಿಯಲು ಮಹಿಳೆಯರು ಹಾಗೂ ಸಾರ್ವಜನಿಕರು ಮುಗಿಬೀಳುತ್ತಿದ್ದು, ನೂಕುನುಗ್ಗಲು ಉಂಟಾಗಿ ಸಣ್ಣಪುಟ್ಟ ಜಗಳ, ವಾಗ್ವಾದಗಳೂ ನಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಅವರು ಆಲಮಟ್ಟಿ ಜಾಕ್‌ವೆಲ್ ಪಂಪ್‌ಹೌಸ್‌ಗೆ ಭೇಟಿ ನೀಡಿ, ದುರಸ್ತಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಿಬ್ಬಂದಿಗೆ ತಾಕೀತು ಮಾಡಿದ್ದರು. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದ ನಗರಸಭೆ ಆಯುಕ್ತರು, “ರವಿವಾರ ಸಂಜೆಯೊಳಗೆ ದುರಸ್ತಿ ಕಾರ್ಯ ಮುಗಿಯಲಿದ್ದು, ಸೋಮವಾರದಿಂದ ನಗರಕ್ಕೆ ನೀರು ಸರಬರಾಜಾಗಲಿದೆ” ಎಂದು ಭರವಸೆ ನೀಡಿದ್ದರು.
ಆದರೆ, ಸೋಮವಾರವೂ ನಗರಕ್ಕೆ ನೀರು ಪೂರೈಕೆಯಾಗದ ಕಾರಣ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ, ಪಂಪ್‌ಹೌಸ್ ನೀರಿನ ಮೋಟರ್‌ನಲ್ಲಿ ಮತ್ತೆ ತಾಂತ್ರಿಕ ದೋಷ ಕಂಡುಬAದಿರುವುದರಿAದ ನೀರು ಪೂರೈಕೆ ವಿಳಂಬವಾಗುತ್ತಿದೆ ಆದ್ದರಿಂದ ನಗರದಲ್ಲಿನ ವಾರ್ಡುಗಳಿಗೆ ನಗರಸಭೆ ವತಿಯಿಂದ ಟ್ಯಾಂಕರ್‌ಗಳನ್ನು ಕಳಿಸಲಾಗುತ್ತಿದ್ದು, ಜನರು ನೀರನ್ನು ತುಂಬಿಕೊಳ್ಳುವAತೆ ಮನವಿ ಮಾಡಿದ್ದಾರೆ. ವರದಿ : ಭೀಮಣ್ಣ ಗಾಣಿಗೇರ





