More care is needed for the health of young children: Dr Mahesh Kore  ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ : ಡಾ ಮಹೇಶ ಕೋರೆ

WhatsApp Group Join Now
Telegram Group Join Now
Instagram Group Join Now
Spread the love

More care is needed for the health of young children: Dr Mahesh Kore   ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ : ಡಾ ಮಹೇಶ ಕೋರೆ

health ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ : ಡಾ ಮಹೇಶ ಕೋರೆ

ಇಳಕಲ್ : ಉತ್ತರ ಕರ್ನಾಟಕದ ಮಕ್ಕಳ ವೈದ್ಯರಿಗಾಗಿ ಇಳಕಲ್‌ನ ಮಹೇಶ್ವರಿ ಆಸ್ಪತ್ರೆಯ ಅಯೋಧ್ಯಾಬಾಯಿ ಕಿಸಂಗೋಪಾಲ್ ದರಕ್ ಸಭಾಂಗಣದಲ್ಲಿ ರೀಚಿ ಎಂಬ ಕಾರ್ಯಾಗಾರ ಏರ್ಪಡಿಸಲಾಗಿತ್ತು . ಇದರಲ್ಲಿ 50 ಕ್ಕೂ ಹೆಚ್ಚು ಮಕ್ಕಳ ವೈದ್ಯರು ಭಾಗವಹಿಸಿದ್ದರು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಡಾ.ಮಹೇಶ ಕೋರೆ, ಡಾ.ಸುಷ್ಮಾ ಕೋರೆ ಹಾಗೂ ರಾಯಚೂರಿನ ಡಾ.ಮಲ್ಲೇಶಗೌಡ ಈ ಕಾರ್ಯಕ್ರಮದ ಮುಖ್ಯ ಭಾಷಿಕರಾಗಿ ಆಗಮಿಸಿದ್ದರು.

ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ : ಡಾ ಮಹೇಶ ಕೋರೆ

ಪ್ರತಿಯೊಬ್ಬ ಪಾಲಕರಲ್ಲಿ ತಮ್ಮ ತಮ್ಮ ಮಕ್ಕಳ ಬಗ್ಗೆ ಪ್ರೀತಿ ಹೊಂದಿದ್ದು ಮಕ್ಕಳಿಗೆ ಸ್ವಲ್ಪ ಏನಾದರೂ ಆದಾಗ ವೈದ್ಯರತ್ತ ದೌಡಾಯಿಸುತ್ತಾರೆ ಅವರಿಗೆ ಸರಳ ರೀತಿಯಲ್ಲಿ ತಿಳಿ ಹೇಳಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ನಿಪ್ಪಾಣಿಯ ವೈದ್ಯ ಮಹೇಶ ಕೋರೆ ಹೇಳಿದರು.

ಇಲ್ಲಿನ ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯ ಅಯೋಧ್ಯಾಬಾಯಿ ಕಿಸನಗೋಪಾಲ ದರಕ ಸಭಾಂಗಣದಲ್ಲಿ ಸಂಘಟಿಸಲಾಗಿದ್ದ ಉತ್ತರ ಕರ್ನಾಟಕ ಮಕ್ಕಳ ವೈದ್ಯರ ಸಮ್ಮೇಳನದಲ್ಲಿ ಉದ್ಘಾಟಕರಾಗಿ ಮಾತನಾಡಿದ ಅವರು ವೈದ್ಯರು ತೋರಿಸುವ ಪ್ರೀತಿ ವಿಶ್ವಾಸದ ಮೇಲೆಯೇ ಪಾಲಕರು ಸಂತುಷ್ಟರಾಗುತ್ತಿದ್ದು ವೈದ್ಯರಲ್ಲಿ ಸಿಡುಕು ಸ್ವಭಾವ ಸಲ್ಲದು ಎಂದು ಹೇಳಿದರು.

ಬಾಗಲಕೋಟ, ವಿಜಯಪುರ ಬೆಳಗಾವಿ ರಾಯಚೂರು ಕೊಪ್ಪಳ ಮುಂತಾದ ಜಿಲ್ಲೆಗಳ ಐವತ್ತುಕ್ಕೂ ಹೆಚ್ಚಿನ ವೈದ್ಯರು ಭಾಗವಹಿಸಿದ ಈ ಸಮ್ಮೇಳನದಲ್ಲಿ ಬಾಗಲಕೋಟೆಯ ಆರ್ ಟಿ ಪಾಟೀಲ, ಗದಗದ ಜಾಫರಲಿ ಲಖಾನಿ, ಹುಬ್ಬಳ್ಳಿಯ ಶ್ರೀನಾಥ ಮುಗಳಿ, ಕುಷ್ಟಗಿಯ ಎನ್ ಎಸ್ ಪಾಟೀಲ ಇಳಕಲ್ ದ ಸುನೀಲ ಭೈರಗೊಂಡನವರ ಇವರನ್ನು ಸತ್ಕರಿಸಲಾಯಿತು
ಅತಿಥಿಗಳಾಗಿ ನಿಪ್ಪಾಣಿಯ ಡಾ ಸುಷ್ಮಾ ಕೋರೆ ರಾಯಚೂರಿನ ಡಾ ಮಲ್ಲೇಶಗೌಡ ಆಗಮಿಸಿ ಚಿಕ್ಕಮಕ್ಕಳ ವೈದ್ಯರು ಅನುಭವಿಸುವ ತೊಂದರೆಗಳನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ಡಾ ಪವನಕುಮಾರ ದರಕ ವಹಿಸಿದ್ದರು. ಡಾ ರಶ್ಮೀ ದರಕ ಸ್ವಾಗತಿಸಿದರು. ಡಾ ಅರ್ಷದ್ ಬಾಗವಾನ ವಂದಿಸಿದರು ಡಾ ಪ್ರಭು ಮದಭಾವಿ ನಿರೂಪಿಸಿದರು.


Spread the love

Leave a Comment

error: Content is protected !!