
Give Kashappa a ministerial position ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಿ : ಸರಸ್ವತಿ ಈಟಿ ಆಗ್ರಹ
ಇಳಕಲ್ಲ : ಡಿ.ಕೆ.ಶಿವಕುಮಾರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮಹಿಳಾ ಮುಖಂಡೆ ಸರಸ್ವತಿ ಈಟಿ ಪಕ್ಷದ ಹೈಕಮಾಂಡ್ಗೆ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉತ್ತರ ಕರ್ನಾಟಕ ಭಾಗದ ಅತ್ಯಂತ ಗಟ್ಟಿ ಧ್ವನಿಯಾಗಿರುವ ಶಾಸಕ ಕಾಶಪ್ಪನವರ ವಿಧಾನಸೌಧದಲ್ಲಿ ಜನರ ಮತ್ತು ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವ ನಾಯಕರಾಗಿದ್ದಾರೆ. ಎಲ್ಲಾ ಸಮಾಜದೊಂದಿಗೆ ಉತ್ತಮ ಭಾಂಧ್ಯವನ್ನು ಕೂಡ ಅವರು ಹೊಂದಿದ್ದಾರೆ. ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಒತ್ತು ಮತ್ತು ಉತ್ತಮ ಸ್ಥಾನಮಾನಗಳನ್ನು ಶಾಸಕರು ನೀಡುತ್ತಾ ಬಂದಿದ್ದಾರೆ.
ಕಾಶಪ್ಪನವರ ಕುಟುಂಬ ಕಾಂಗ್ರೆಸ್ ಪಕ್ಷದಲ್ಲಿ ೫೦ ವರ್ಷಗಳಿಂದ ದುಡಿಯುತ್ತಾ ಬಂದಿದ್ದಾರೆ. ಪಕ್ಷ ಸಂಘಟನೆ ಮತ್ತು ಉಪಚುನಾವಣೆಗಳಲ್ಲಿಯೂ ಕೂಡಾ ಮುಂದಾಳತ್ವ ವಹಿಸಿಕೊಂಡು ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ಶಾಸಕರು ವಹಿಸಿದ್ದಾರೆ. ಸಚಿನ ಸ್ಥಾನ ನೀಡಿದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಅದ್ದರಿಂದ ಎರಡನೇ ಸಚಿವ ಸಂಪುಟದಲ್ಲಿ ಶಾಸಕ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)





