
ಮುರ್ತುಜಾ ಖಾದ್ರಿ ದರ್ಗಾ ಆಡಳಿತಾಧಿಕಾರಿಗೆ ವಕ್ಫ್ ಬೋರ್ಡ್ ಅಧ್ಯಕ್ಷರಿಂದ ಮನವಿ
ಇಳಕಲ್ : ಕೋಮು ಸಾಮರಸ್ಯ ಸಾರುವ ಮುರ್ತುಜಾ ಖಾದ್ರಿ ದರ್ಗಾ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ತ್ಯಾಜ್ಯ ತುಂಬಿದೆ ಎಂದು ಬಾಗಲಕೋಟೆ ಜಿಲ್ಲೆ ವಕ್ಫ್ ಮಂಡಳಿಯ ಅಧ್ಯಕ್ಷ ಮೆಹಬೂಬ ಸರಕಾವಸ ದರ್ಗಾ ಸಮಿತಿಯ ಅಧ್ಯಕ್ಷ ಇಳಕಲ್ ತಹಸೀಲ್ದಾರ ಸತೀಶ ಕೂಡಲಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಕ್ಫ್ ಮಂಡಳಿಯ ವತಿಯಿಂದ ಅಲ್ಲಿನ ಸ್ಥಳ ಪರಿಶೀಲನೆ ಮತ್ತು ಸತ್ಯಾಸತ್ಯತೆಯ ಬಗ್ಗೆ ವಿಕ್ಷೀಸಲು ಹೋದಾಗ ದರ್ಗಾದಲ್ಲಿ ಧ್ವನಿವರ್ಧಕ ಹಾಗೂ ಯುಪಿಎಸ್ ಸಮಸ್ಯೆ ಕಂಡು ಬಂದಿದೆ ಲೈಟುಗಳು ಸರಿಯಾಗಿ ಹತ್ತುವದಿಲ್ಲ ಸ್ವಚ್ಛತೆ ಸಹ ಇಲ್ಲದಿರುವದು ಕಂಡು ಬಂದಿದೆಯಲ್ಲದೇ ದರ್ಗಾ ಆವರಣದ ಬೆಲೆ ಬಾಳುವ ಆಸ್ತಿಯನ್ನು ಕೆಲವರು ಆಕ್ರಮಿಸಿದ್ದು ಕಂಡು ಬಂದಿದೆ ಇಂತಹ ಎಲ್ಲಾ ಆಕ್ರಮಗಳ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಿ ಎಂದವರು ತಹಸೀಲ್ದಾರರಿಗೆ ಒತ್ತಾಯಿಸಿದರು.
ತಹಸೀಲ್ದಾರ ಸತೀಶ ಕೂಡಲಗಿ ಈ ಬಗ್ಗೆ ಮೆಹಬೂಬ ಸರಕಾವಸ ಅವರಿಗೆ ಮಾತನಾಡಿ ವಕ್ಫ್ ಕಾಯ್ದೆಯ ಪ್ರಕಾರ ತಪ್ಪು ಮಾಡಿದ್ದು ಕಂಡು ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವದು ಸರಕಾರದ ಮತ್ತು ನ್ಯಾಯಾಲಯದ ಆದೇಶಗಳ ಪಾಲನೆಯಲ್ಲಿ ಯಾವದೇ ಹಿಂಜರಿಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಅದೇ ರೀತಿ ದರ್ಗಾದ ಆವರಣದಲ್ಲಿ ಇರುವ ಕೈಗಾರಿಕೆಗಳ ಲೈಸೆನ್ಸ್ ಅನುಮತಿ, ಭಾಡಿಗೆ ಪತ್ರಗಳು ಮತ್ತು ಇತರೆ ದಾಖಲಾತಿಗಳನ್ನು ಪರಿಶೀಲಿಸಬೇಕು ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ಮನವಿಯನ್ನು ಸರಕಾವಸ ಮಾಡಿಕೊಂಡಿದ್ದಾರೆ.





