It is not politics to complain when you lose and to be arrogant when you win: Minister Hebbalkar ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ : ಸಚಿವೆ  ಹೆಬ್ಬಾಳಕರ್

WhatsApp Group Join Now
Telegram Group Join Now
Instagram Group Join Now
Spread the love

It is not politics to complain when you lose and to be arrogant when you win: Minister Hebbalkar ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ : ಸಚಿವೆ  ಹೆಬ್ಬಾಳಕರ್

Minister Hebbalkar ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ : ಸಚಿವೆ  ಹೆಬ್ಬಾಳಕರ್

 

ಬೆಳಗಾವಿ : ಗೆದ್ದಾಗ ಸೊಕ್ಕಾಗಲಿ, ಸೋತಾಗ ಸೊರಗುವುದಾಗಲಿ ನನ್ನ ಜಾಯಮಾನವಲ್ಲ. ಸೋಲಲಿ, ಗೆಲ್ಲಲಿ ಯಾವತ್ತೂ ಜನರೊಂದಿಗಿದ್ದು ಅವರ ಕಷ್ಟ ಸುಖದಲ್ಲಿ ಭಾಗಿಯಾಗುವುದು ನನ್ನ ಗುಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮೂಡಲಗಿ ತಾಲೂಕಿನ ಅರಭಾವಿ ಬಳಿಯ ಬಸವೇಶ್ವರ ಸಮುದಾಯ ಭವನದಲ್ಲಿ ಅರಭಾವಿ ಮತ್ತು ಗೋಕಾಕ ಮತಕ್ಷೇತ್ರ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು. ಸೋಲು, ಗೆಲುವು ಸಹಜ ಪ್ರಕ್ರಿಯೆ.It is not politics to complain when you lose and to be arrogant when you win: Minister Hebbalkar ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ : ಸಚಿವೆ  ಹೆಬ್ಬಾಳಕರ್ರಾಜಕಾರಣ ನಿಂತ ನೀರಲ್ಲ, ಗೆಲುವು ಯಾರ ಸ್ವತ್ತಲ್ಲ, ಬಿದ್ದಾಗ ಸೊರಗೋದು, ಗೆದ್ದಾಗ ಸೊಕ್ಕು ಮಾಡೋದು ರಾಜಕಾರಣವಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಬೆಳಗಾವಿ ಲೋಕಸಭೆಯ ಇತಿಹಾಸದಲ್ಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆದಿದೆ. ತಾಂತ್ರಿಕವಾಗಿ ಸೋತಿರಬಹುದು. ಆದರೆ ಅತೀ ದೊಡ್ಡ ಸಂಖ್ಯೆಯಲ್ಲಿ ಜನರು ನಮ್ಮನ್ನು ಬೆಂಬಲಿಸಿದ್ದಾರೆ. ಪ್ರಚಾರಕ್ಕೆ ಹೋದಾಗ ಎಲ್ಲಕಡೆ ಅಭೂತಪೂರ್ವ ಬೆಂಬಲ ಸಿಗುತ್ತಿತ್ತು.

ಈ ಬಾರಿ ಕಾಂಗ್ರೆಸ್ ಗೆuಟಿಜeಜಿiಟಿeಜಲುವು ಖಚಿತ ಎಂದು ಎಲ್ಲ ಕಡೆ ಜನರೇ ಮಾತನಾಡುತ್ತಿದ್ದರು. ಆದರೆ ಕಾರಣಾಂತರಗಳಿAದ ಸೋತಿರಬಹುದು. ಇಂದಿರಾಗಾAಧಿ, ಸಿದ್ದರಾಮಯ್ಯ ಸೇರಿದಂತೆ ಸೋತವರೆಲ್ಲ ಮತ್ತೆ ಎದ್ದು, ಗೆದ್ದು ರಾಜಕಾರಣದಲ್ಲಿ ಹೆಸರು ಮಾಡಿದ್ದಾರೆ. ಅವರು ನಮಗೆ ಆದರ್ಶ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಾವು ಸದಾ ನಿಮ್ಮ ಜೊತೆಗಿರುತ್ತೇವೆ. ನಿಮ್ಮನ್ನು ದೂರ ಮಾಡುವ ಮನೋಭಾವ ನಮ್ಮದಲ್ಲ. ಸೋಲಿನಿಂದ ಕಂಗೆಡುವುದು ಬೇಡ. ಕೆಲವರು ಸೋತರೆ ಧಮಕಿ ಹಾಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾರಿಗೂ ಹೆದರಬೇಕಿಲ್ಲ. ಬೇರೆಯವರು ನಮಗೆ ಅನ್ನ ಹಾಕುವುದಿಲ್ಲ. ಸ್ವಾಭಿಮಾನದಿಂದ ಬದುಕೋಣ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡೋಣ ಎಂದು ಅವರು ತಿಳಿಸಿದರು.


Spread the love

Leave a Comment

error: Content is protected !!