Theft cases ಕಳ್ಳತನ ಪ್ರಕರಣಗಳು : ಹೆಚ್ಚಿನ ಸಿಬ್ಬಂದಿ ನಿಯೋಜನೆ
ಇಳಕಲ್ : ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಬಾಗಲಕೋಟೆ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಶಹರ್ ಪೋಲಿಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ.
ಶಹರ್ ಪೋಲಿಸ್ ಠಾಣೆಯ ಪಿಎಸ್ ಐ ಷಹಜಹಾನ ನಾಯ್ಕ್ ಕೋರಿಕೆಯ ಮೇರೆಗೆ ಎಸ್ ಪಿಯವರು ಹತ್ತು ಮಂದಿ ಸಿಬ್ಬಂದಿಯನ್ನು ಐದು ಸುಸಜ್ಜಿತ ವಾಹನಗಳೊಂದಿಗೆ ಕಳಿಸಿಕೊಟ್ಟಿದ್ದಾರೆ.
ನಗರದ ಪೋಲಿಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕಾತಿ ಮಾಡುವವರೆಗೆ ಈ ಹತ್ತು ಜನ ಪೋಲಿಸರು ಹಗಲು ಮತ್ತು ರಾತ್ರಿ ನಗರದ ಎಲ್ಲಾ ಭಾಗಗಳಲ್ಲಿ ಮತ್ತು ಬಡಾವಣೆಗಳಲ್ಲಿ ಗಸ್ತು ಹೊಡೆಯುತ್ತಾರೆ ಯಾವುದೇ ಕಳ್ಳತನ ಪ್ರಕರಣಗಳು ನಡೆಯದಂತೆ ನೋಡಿ ಕೊಳ್ಲುತ್ತಾರೆ.
ಈ ಬಗ್ಗೆ ಅವರಿಗೆ ಸೂಕ್ತ ಮರ್ಗರ್ಶನ ನೀಡಲಾಗಿದೆ ಎಂದು ಪಿಎಸ್ ಐ ಷಹಜಹಾನ ನಾಯ್ಕ್ ಪತ್ರಿಕೆಗೆ ತಿಳಿಸಿದರು.






