ಹಿರೇ ಓತಗೇರಿ ಗ್ರಾಮದಲ್ಲಿ ಕೆಎಚ್ಪಿಟಿ ವತಿಯಿಂದ ಕಾವಲು ಸಮಿತಿ ರಚನಾ ಸಭೆ
ಕಂದಗಲ್ಲ : ಕೆ ಎಚ್ ಪಿ ಟಿ ಸ್ಪೂರ್ತಿ ಯೋಜನೆ ಅಡಿಯಲ್ಲಿ ಕಾವಲು ಸಮಿತಿಯ ರಚನೆ ಮತ್ತು ಸ್ಟೇಟ್ ಓಡರ್ ಮೀಟಿಂಗ್ಸ್ ಈ ಎರಡು ಸಭೆಗಳನ್ನು ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮ ಪಂಚಾಯತಿಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಾಯಕತ್ವ ಮತ್ತು ಲಿಂಗ ಸಮಾನತೆ ಬಾಲ್ಯ ವಿವಾಹದ ಕುರಿತು ಮತ್ತು ಶಾಲೆ ಬಿಟ್ಟ ಮಕ್ಕಳ ಮಾಹಿತಿ ಒಬ್ಬ ನಾಯಕನಾದವನ ಗುಣಲಕ್ಷಣಗಳು ಹೇಗಿರಬೇಕು ಹೇಗಿರಬಾರದು ಎಂಬುದನ್ನು ಮಕ್ಕಳಿಂದ ಒಂದು ಚಟುವಟಿಕೆ ಮಾಡಿಸುವ ಮೂಲಕ ಕೆ ಎಚ್ ಪಿ ಟಿ ಸ್ಪೂರ್ತಿಯ ಜಿಲ್ಲಾ ಸಂಯೋಜಕರಾದ ಅರ್ಜುನ್ ಮಿರ್ಜಿ ತಿಳಿಸಿಕೊಟ್ಟರು.
ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ,ಅದ್ಯಕ್ಷರು,ಉಪಾದ್ಯಕ್ಷರು, ಪಂಚಾಯತ್ ಕಾರ್ಯದರ್ಶಿಗಳು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತಿ ಸಿಬ್ಬಂದಿ ವರ್ಗ, ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಅಂಗನವಾಡಿ ಮೇಲ್ವಿಚಾರಕರು ಮತ್ತು ಸಮುದಾಯದವರು ಮತ್ತು ಪೋಲಿಸ್ ಸಿಬ್ಬಂದಿ, ಶಾಲಾ ವಿದ್ಯಾರ್ಥಿನಿಯರು ಹಾಗೂ ಹುಡುಗರು ಊರಿನ ಮುಖ್ಯಸ್ಥರು ಮಹಿಳಾ ಸಂಘದ ಪ್ರತಿನಿಧಿ ಕೆ ಎಚ್ ಪಿ ಟಿ ಸ್ಪೂರ್ತಿ ಯೋಜನೆ ಕಡೆಯಿಂದ ಜಿಲ್ಲಾ ಯೋಜನಾಧಿಕಾರಿಗಳು ಮತ್ತು ಎಂಎನ್ಡಿ ಚಿಕ್ಕ ಕೊಡಗಲಿ ಜಿಪಿ ಸಮುದಾಯ ಸಂಘಟಕಿ ಶಾಂತ ಕಂದಕೂರ್ ಮತ್ತು ನಂದ್ವಾಡಗಿ ಜಿಪಿ ಸಮುದಾಯ ಸಂಘಟಿಕಿ ಗಂಗಮ್ಮ ಕಟಾಮ್ಲಿ ಹಾಗೂ ಹಿರೇಓತಗೇರಿ ಜಿಪಿ ಸಮುದಾಯ ಸಂಘಟಕಿ ಶಂಶಾದ ವಾಲಿಕಾರ ಕ್ಷೇತ್ರ ಸಂಯೋಜಕರಾದ ತ್ರಿವೇಣಿ ಜುಮ್ಕ ಎಲ್ಲರೂ ಉಪಸ್ಥಿತಿಯಲ್ಲಿದ್ದರು.






