ಇಳಕಲ್ ಮುರ್ತುಜಾ ಖಾದ್ರಿ ದರ್ಗಾಬಳಿ ಸಿಗ್ನಲ್ ಲೈಟ್ ಹಾಕಲು ಒತ್ತಾಯ
ಇಳಕಲ್ : ರಾಷ್ಟ್ರೀಯ ಹೆದ್ದಾರಿ ೫೦ ರ ಸೋಲಾಪೂರ ಮಂಗಳೂರು ರಸ್ತೆಯ ಮುರ್ತುಜಾ ಖಾದ್ರಿ ದರ್ಗಾ
ಬಳಿ ಸಿಗ್ನಲ್ ಲೈಟುಗಳ ಜೋಡಣೆ ಅಗತ್ಯವಾಗಿದೆ ಎಂದು ಕೈಮಗ್ಗದ ಸೀರೆ ವ್ಯಾಪಾರಸ್ಥ ಜಗದೀಶ ಕಸ್ತೂರಿ ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಬಸವೇಶ್ವರ ಸರ್ಕಲ್ ನಲ್ಲಿ ಜೋಡಿಸಿದ ಹಾಗೆ ಇದೇ ಹೆದ್ದಾರಿಯಲ್ಲಿ
ಮುರ್ತುಜಾ ಖಾದ್ರಿ ದರ್ಗಾದ ಮತ್ತು ಡಾ ಎನ್ ಆರ್ ಪಾಟೀಲ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ಮಧ್ಯದಲ್ಲಿ
ಸಿಗ್ನಲ್ ಲೈಟ್ ಜೋಡಿಸಿದರೆ ವಾಹನಗಳ ವೇಗವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.






