GT Mall ಧೋತಿ ಧರಿಸಿದ ರೈತನಿಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ ಜಿಟಿ ಮಾಲ್ಗೆ ಬಿತ್ತು ಬೀಗ
2023-24 ನೇ ಸಾಲಿಗೆ ₹ 1.8 ಕೋಟಿ ಮೊತ್ತದ ತೆರಿಗೆ ಪಾವತಿಸದ ಕಾರಣ ಹಿರಿಯ ರೈತನಿಗೆ ಪ್ರವೇಶ ನಿರಾಕರಿಸಿದ್ದ ಜಿಟಿ ಮಾಲ್ ಅನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುರುವಾರ ಮುಚ್ಚಿದೆ.
ನಂತರ ಮಾಲ್ನ ಮಾಲೀಕರು ರೈತನಿಗೆ ಆದ ಅವಮಾನದ ಬಗ್ಗೆ ವಿಷಾದ ವ್ಯಕ್ತಪಡಿಸಿ, ಒಂದು ವಾರ ತಮ್ಮ ಮಾಲ್ನ್ ಮುಚ್ಚುವುದಾಗಿ ಹೇಳಿದರು.
ಕಂದಾಯ ಅಧಿಕಾರಿ ಅಮಾನತು
ಬಿಬಿಎಂಪಿಯ ಅಧಿಕಾರಿಗಳು ಬೆಳಿಗ್ಗೆ 11ರ ಸುಮಾರಿಗೆ ಮಾಲ್ಗೆ ಆಗಮಿಸಿ, ಪಾವತಿಸದ ತೆರಿಗೆಗಳ ಬಗ್ಗೆ ನೋಟಿಸ್ ನೀಡಿ ಮಾಲ್ನ ಮುಚ್ಚಿದರು.
ತೆರಿಗೆಗಳನ್ನು ಸಂಗ್ರಹಿಸಲು ವಿಫಲವಾದ ನಾಗರಿಕ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯಕ್ಕಾಗಿ ಅವರನ್ನ ಅಮಾನತುಗೊಳಿಸಲಾಗುವುದು ಎಂದು ಹಿರಿಯ ಕಂದಾಯ ಅಧಿಕಾರಿಯೊಬ್ಬರು ತಿಳಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 126 (2) ರ ಅಡಿಯಲ್ಲಿ ನಿರ್ಬಂಧ ಮತ್ತು ವ್ಯಕ್ತಿಯು ಯಾವುದೇ ದಿಕ್ಕಿನಲ್ಲಿ ಮುಂದುವರಿಯುವುದನ್ನು ಸ್ವಯಂಪ್ರೇರಿತವಾಗಿ ಅಡ್ಡಿಪಡಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಲಾಗಿದೆ. ದೂರುದಾರರಾದ ನಗರಬಾವಿಯ ಸಾಮಾಜಿಕ ಕಾರ್ಯಕರ್ತ ಧರ್ಮರಾಜ್ ಗೌಡ ಅವರು ಮಂಗಳವಾರ ರೈತ ಫಕೀರಪ್ಪನನ್ನು ಅವಮಾನಿಸಿದ್ದಕ್ಕಾಗಿ ಮಾಲ್ ಮಾಲೀಕ ಮತ್ತು ಭದ್ರತಾ ಸಿಬ್ಬಂದಿ ಅರುಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಈ ವಿಷಯವನ್ನು ವಿಧಾನಸಭೆಯಲ್ಲಿಯೂ ಚರ್ಚಿಸಲಾಯಿತು ಮತ್ತು ರೈತನನ್ನು ಅವಮಾನಿಸಿದ್ದಕ್ಕಾಗಿ ಮಾಲ್ ಅನ್ನು ಮುಚ್ಚಲು ಕಾನೂನಿನಲ್ಲಿ ನಿಬಂಧನೆಗಳಿವೆ ಎಂದು ರಾಜ್ಯ ಸರ್ಕಾರ ಹೇಳಿದೆ.






