Tungabhadra Gate Cut: Farmers’ welfare is the first priority: CM Siddaramaiah ತುಂಗಭದ್ರಾ ಗೇಟ್ ಕಟ್ : ರೈತರ ಹಿತ ಕಾಯುವುದು ಮೊದಲ ಆದ್ಯತೆ : ಸಿ.ಎಂ.ಸಿದ್ದರಾಮಯ್ಯ

WhatsApp Group Join Now
Telegram Group Join Now
Instagram Group Join Now
Spread the love

Tungabhadra Gate Cut: Farmers' welfare is the first priority: CM Siddaramaiah ತುಂಗಭದ್ರಾ ಗೇಟ್ ಕಟ್ : ರೈತರ ಹಿತ ಕಾಯುವುದು ಮೊದಲ ಆದ್ಯತೆ : ಸಿ.ಎಂ.ಸಿದ್ದರಾಮಯ್ಯ

ತುಂಗಭದ್ರಾ ಗೇಟ್ ಕಟ್ : ರೈತರ ಹಿತ ಕಾಯುವುದು ಮೊದಲ ಆದ್ಯತೆ : ಸಿ.ಎಂ.ಸಿದ್ದರಾಮಯ್ಯ

ತುಂಗಭದ್ರಾ ಜಲಾಶಯದಲ್ಲಿ ೧೯ನೇ ಟ್ರಸ್ಟ್ ಗೇಟ್ ಕಳಚಿರುವ ಪ್ರಕರಣಕ್ಕೆ ಸಂಬAಧಿಸಿದAತೆ ನಾವು ರಾಜಕೀಯ ಮಾಡುವುದಿಲ್ಲ.

ಅಲ್ಲದೆ, ಸದ್ಯಕ್ಕೆ ಯಾರ ಮೇಲೆ ಗೂಬೆ ಕೂರಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಬಸಾಪೂರ ಗ್ರಾಮದ ಲಘು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ

ಅವರು, ತುಂಗಭದ್ರಾ ಬೋರ್ಡ್ ಇರುವುದು ಕೇಂದ್ರ ಸರಕಾರದ ಅಧೀನದಲ್ಲಿ. ಬೋರ್ಡ್ ಗೆ ಐಎಎಸ್ ಅಧಿಕಾರಿಗಳನ್ನು ಭಾರತ ಸರಕಾರ ನೇಮಕ ಮಾಡುತ್ತದೆ.

ಬೋರ್ಡ್ ನಲ್ಲಿ ರಾಜ್ಯ, ಆಂಧ್ರ, ತೆಲಂಗಾಣದ ಅಧಿಕಾರಿಗಳು ಇರುತ್ತಾರೆ ಎಂದರು.

Tungabhadra Gate Cut: Farmers' welfare is the first priority: CM Siddaramaiah ತುಂಗಭದ್ರಾ ಗೇಟ್ ಕಟ್ : ರೈತರ ಹಿತ ಕಾಯುವುದು ಮೊದಲ ಆದ್ಯತೆ : ಸಿ.ಎಂ.ಸಿದ್ದರಾಮಯ್ಯ

ವಾಸ್ತವವಾಗಿ ನಿರ್ವಹಣೆ ವೈಫಲ್ಯ ಇರುವುದು ಕೇಂದ್ರ ಸರಕಾರದಿಂದ.

ಇದೆಲ್ಲವನ್ನು ಆರೋಪ ಮಾಡಬೇಕಿದ್ದು ಕೇಂದ್ರದ ಮೇಲೆ. ಆದರೆ, ನಾನು ಡ್ಯಾಂ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ.

ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದರು.

ಈಗ ತುಂಗಭದ್ರಾ ೧೯ ನೇ ಗೇಟ್ ಕಟ್ಟಾಗಿದೆ. ಇದರಲ್ಲಿ ರಾಜ್ಯ ಸರಕಾರದ ಹೊಣೆಗೇಡಿತನ ಅಂದ್ರೆ ಏನರ್ಥ…?

ಇದರ ನೇರ ಹೊಣೆ ಬೋರ್ಡ್ ನದ್ದು.ಆದರೂ ಇದರಲ್ಲಿ ನಾನು ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಹೇಳಲು ಹೋಗಲ್ಲ.

ಸದ್ಯ ರೈತರ ಹಿತ ಕಾಯುವುದು ಮೊದಲ ಆದ್ಯತೆ. ತುಂಗಭದ್ರಾ ಜಲಾಶಯ ೧೦೫ ಟಿಎಂಸಿ ತುಂಬಿತ್ತು.

ಇದರಲ್ಲಿ ೫೦ ಟಿಎಂಸಿ ನೀರು ಹೊರ ಬಿಡಬೇಕಿದೆ. ಉಳಿಯುವ ನೀರನ್ನು ರೈತರ ಅನುಕೂಲಕ್ಕೆ ಬಳಸಲಾಗುವುದು ಎಂದರು.


Spread the love

Leave a Comment

error: Content is protected !!