Ilakal Urban Bank ಇಳಕಲ್ ಅರ್ಬನ್ ಬ್ಯಾಂಕ್ನ ಶಾಖಾ ಕಚೇರಿ ಗುಡೂರ ಎಸ್.ಸಿ.ಯಲ್ಲಿ ಎಟಿಎಂ ಉದ್ಘಾಟನೆ
ಬಾಗಲಕೋಟ : ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ ಕೋ ಆಪ್ರೇಟಿವ್ ಬ್ಯಾಂಕಿನ ಶಾಖಾ ಕಚೇರಿ
ಗುಡೂರ ಎಸ್ಸಿ ಕಚೇರಿಯಲ್ಲಿ ನೂತನ ಎಟಿಎಂ ಮಶೀನ ಹಾಗೂ ಮೊಬೈಲ್ ಬ್ಯಾಂಕಿಗೆ ಸೇವೆಯನ್ನು ಉದ್ಘಾಟಿಸಿದರು.
ಈ ಸಮಯದಲ್ಲಿ ಬ್ಯಾಂಕಿನ ಅಧ್ಯಕ್ಷ ಅರವಿಂದ ಮಂಗಳೂರ ಮಾತನಾಡಿ ಬ್ಯಾಂಕಿನ ಸದಸ್ಯರು ಎಟಿಎಂ ಮತ್ತು ಮೊಬೈಲ್
ಬ್ಯಾಂಕಿಗೆ ಸೇವೆಯ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರು ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಾಗರಾಜ ಕುಟುಗಮರಿ
ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)





