Nikhil Kumaraswamy’s arrival in Badami on July 17th is all set to receive him. ಜುಲೈ 17 ರಂದು ಬಾದಾಮಿಗೆ ನಿಖಿಲ್ ಕುಮಾರಸ್ವಾಮಿ ಆಗಮನ ಹಿನ್ನಲೆ ಸ್ವಾಗತ ಕೋರಲು ಭರದ ಸಿದ್ದತೆ

WhatsApp Group Join Now
Telegram Group Join Now
Instagram Group Join Now
Spread the love

Nikhil Kumaraswamy's arrival in Badami on July 17th is all set to receive him. ಜುಲೈ 17 ರಂದು ಬಾದಾಮಿಗೆ ನಿಖಿಲ್ ಕುಮಾರಸ್ವಾಮಿ ಆಗಮನ ಹಿನ್ನಲೆ ಸ್ವಾಗತ ಕೋರಲು ಭರದ ಸಿದ್ದತೆ

Badami ಜುಲೈ 17 ರಂದು ಬಾದಾಮಿಗೆ ನಿಖಿಲ್ ಕುಮಾರಸ್ವಾಮಿ ಆಗಮನ ಹಿನ್ನಲೆ ಸ್ವಾಗತ ಕೋರಲು ಭರದ ಸಿದ್ದತೆ

ಬಾದಾಮಿಯಲ್ಲಿ ಜೆ. ಡಿ.ಎಸ್.ಪಕ್ಷದಿಂದ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮನಕ್ಕೆ ಭರ್ಜರಿ ಸಿದ್ಧತೆ.

ರಾಜ್ಯದಲ್ಲಿ ಜಾತ್ಯಾತೀತ ಜನತಾ ದಳ ಪಕ್ಷ ಸಂಘಟನೆ ಕಾರ್ಯದಲ್ಲಿತೊಡಗಿದ್ದು ರಾಜ್ಯದಲ್ಲಿ ಎಲ್ಲೆಡೆ ಜೆ. ಡಿ. ಎಸ್.ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಶುರುವಾಗಿದ್ದು ಜೆ. ಡಿ. ಎಸ್.ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷರಾದ ಯುವನಾಯಕ ನಿಖಿಲ್ ಕುಮಾರಸ್ವಾಮಿಯವರು ಇದರ ನೇತೃತ್ವ ವಹಿಸಿದ್ದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಪಕ್ಷ ಸದಸ್ಯತ್ವ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಕೋಟೆ ನಗರಿ ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿಗೆ ಇದೇ ತಿಂಗಳು ೧೭ ತಾರೀಖು ಗುರುವಾರದಂದು ಬಾದಾಮಿಗೆ ಜೆ. ಡಿ.ಎಸ್.ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷರಾದ ಯುವನಾಯಕ ನಿಖಿಲ್ ಕುಮಾರಸ್ವಾಮಿ ಯವರು ಬಾದಾಮಿಗೆ ಆಗಮಿಸುತ್ತಿದ್ದು ,

ಬಾಗಲಕೋಟೆ ಜೆ. ಡಿ.ಎಸ್.ನ ಜಿಲ್ಲಾಧ್ಯಕ್ಷರಾದ ಯುವಮುಖಂಡ್ ಹನಮಂತ ಮಾವಿನಮರದ ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಾಗತ ಮಾಡಿಕೊಳ್ಳಲು ಭರದಿಂದ ಸಿದ್ಧತೆ ನಡೆಸಿದ್ದಾರೆ. ಬ್ಯಾನರ್ ಬಂಟಿAಗ್ಸ್ ಗಳಿಂದ ಬಾದಾಮಿ ಸಿದ್ಧಗೊಂಡಿದ್ದು

ಬಾದಾಮಿ ನಗರದ ಬಸವೇಶ್ವರ ಸರ್ಕಲ್ ನಿಂದ ಮುಖ್ಯ ರಸ್ತೆಯಲ್ಲಿ ಸಾಗುತ್ತಾ ಡಾ! ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಗೌರವನಮನ ಸಲ್ಲಿಸಿ ವಿರಪುಲಿಕೇಶಿ ವೃತ್ತದಿಂದ ಶ್ರೀ ವಿರಪುಲಿಕೇಶಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಜೆ. ಡಿ. ಎಸ್.ನ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಹನಮಂತ ಮಾವಿನಮರದ ತಿಳಿಸಿದ್ದಾರೆ.


Spread the love

Leave a Comment

error: Content is protected !!