press house ಪತ್ರಿಕಾ ಭವನ ನಿರ್ಮಾಣಕ್ಕೆ ಜಾಗೆ, ಅನುದಾನ ನೀಡುವಂತೆ ಆಯುಕ್ತರಿಗೆ ಮನವಿ
ಇಳಕಲ್ಲ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಭವನ ನಿರ್ಮಾಣಕ್ಕೆ ಜಾಗೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ಕಾನಿಪ ಸಂಘದಿAದ ಗುರುವಾರ ಮನವಿ ಸಲ್ಲಿಸಲಾಯಿತು.
ಕಾನಿಪ ಸಂಘದ ಅಧ್ಯಕ್ಷ ಶಾಂತಣ್ಣ ಸರಗಣಾಚಾರಿ ಮಾತನಾಡಿ ನಗರದ ಪತ್ರಕರ್ತರಿಗೆ ಅತಿ ಅಗತ್ಯವಾದ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಲು ಹಾಗೂ ಸಭೆ ಸಮಾರಂಭ ನಡೆಸಲೂ ಸೂಕ್ತವಾದ ಜಾಗೆ ಇಲ್ಲದಿರುವುದರಿಂದ ಹಾಗೂ ಆ ಬಹುದಿನಗಳಿಂದಲೂ ಅಗತ್ಯವಾದ ಪತ್ರಿಕಾ ಭವನ ಕೊರತೆಯನ್ನು ನೀಗಿಸುವ ಕಾರ್ಯವನ್ನು ಮಾಡಬೇಕು ಎಂದು ಮನವಿಯನ್ನು ಸಲ್ಲಿಸಿದರು.
ಈ ಸಮಯದಲ್ಲಿ ಪತ್ರಕರ್ತರಾದ ಮಹಾಂತೇಶ ಗೊರಜನಾಳ, ಖಾಜೇಸಾಬ ಸೋಲಾಪೂರ, ಭೀಮಣ್ಣ ಗಾಣಿಗೇರ, ನಬೀರಸೂಲ ಹುಣಚಗಿ, ಉಸ್ಮಾನ ಸಂಗಮ, ಹರ್ಷದ ದೋಟಿಹಾಳ, ಮಹೇಶ ವಾಲಿಕಾರ ಮತ್ತಿತರರು ಇದ್ದರು.
ವರದಿ: ಭೀಮಣ್ಣ ಗಾಣಿಗೇರ





