Sri Sarvajna Kumbara Gundayya Seva Trust ಕೆಪಿಸಿಸಿ ನೇಕಾರ ರಾಜ್ಯಾಧ್ಯಕ್ಷ ವೆಂಕಟೇಶ ಸಾಕಾಗೆ ಶ್ರೀ ಸರ್ವಜ್ಞ ಕುಂಬಾರ ಗುಂಡಯ್ಯ ಸೇವಾ ಟ್ರಸ್ಟ್ ಸತ್ಕಾರ
ಇಳಕಲ್ : ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ನೇಕಾರ ವಿಭಾಗದ ರಾಜ್ಯಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ವೆಂಕಟೇಶ ಸಾಕಾ ಅವರನ್ನು ಇಳಕಲ್ಲದ ಶ್ರೀ ಸರ್ವಜ್ಞ ಕುಂಬಾರ ಗುಂಡಯ್ಯ ಸೇವಾ ಟ್ರಸ್ಟ್ ವತಿಯಿಂದ ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಶ್ರೀ ಸರ್ವಜ್ಞ ಕುಂಬಾರ ಗುಂಡಯ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಚಕ್ರಸಾಲಿ ಮಾತನಾಡಿ ವೆಂಕಟೇಶ್ ಸಾಕಾ ಅವರ ಸಮಾಜಮುಖಿ ಸೇವೆ, ಸಂಘಟನಾ ಚಾತುರ್ಯ ಹಾಗೂ ನೇಕಾರ ಸಮುದಾಯದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು
ಟ್ರಸ್ಟ್ ವತಿಯಿಂದ ಪ್ರಶಂಸಿಸಿ ಗೌರವಿಸಲಾಯಿತು. ಇವರ ಮುಂದಿನ ಕಾರ್ಯಚಟುವಟಿಕೆಗಳು ಇನ್ನಷ್ಟು ಯಶಸ್ಸು ಕಾಣಲೆಂದು ಶುಭ ಹಾರೈಸಿದರು. ಉಪಾಧ್ಯಕ್ಷ ಸಂಗಪ್ಪ ಸಂಗಮ್,ಕಾರ್ಯದರ್ಶಿ ಸೋಮಶೇಖರ ಕುಂಬಾರ ಹಾಗೂ ಪದಾಧಿಕಾರಿಗಳು ಇದ್ದರು.
ವರದಿ : ಭೀಮಣ್ಣ ಗಾಣಿಗೇರ





