Guru Mahantashree who received his doctorate degree ಡಾಕ್ಟರೇಟ್ ಪದವಿ ಪಡೆದ ಗುರುಮಹಾಂತಶ್ರೀಗಳಿಗೆ ಸತ್ಕಾರ
ಇಳಕಲ್ : ಇಲ್ಲಿನ ಚಿತ್ತರಗಿ ಶ್ರೀ ವಿಜಯಮಹಾಂತೇಶ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀಗುರುಮಹಾಂತ ಮಹಾಸ್ವಾಮಿಗಳಿಗೆ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದರು.
ಈ ಹಿನ್ನೆಲೆಯಲ್ಲಿ, ಕಂದಗಲ್ಲ ಗ್ರಾಮದ ಶ್ರೀಮಠದ ಭಕ್ತರು ಇಳಕಲ್ಲ ಶ್ರೀಮಠಕ್ಕೆ ಆಗಮಿಸಿ ಗುರುಮಹಾಂತಶ್ರೀಗಳನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಸತ್ಕರಿಸಿದರು.
ಈ ಸತ್ಕಾರ ಸಮಾರಂಭದಲ್ಲಿ ಮಲ್ಲಿಕಾರ್ಜುನ ಗಡಿಯಣ್ಣವರ, ಪಂಪಣ್ಣ ಸಜ್ಜನ, ನಾಗೇಶ್ ನೀಲೂಗಲ್ಲ, ಸಂಗಣ್ಣ ಹವಾಲ್ದಾರ್ ರುದ್ರಪ್ಪ ಶೀಲವಂತರ, ಮಹ್ಮದಸಾಬ ಭಾವಿಕಟ್ಟಿ, ಯುಮನೂರಗೌಡ್ರ ಬಳೂಟಗಿ, ರವಿಕುಮಾರ ಗಾಣಿಗೇರ, ಗುರು ಸಜ್ಜನ ಮಹಾಂತೇಶ ವಾಲಿಶಟ್ಟರ ಮತ್ತಿತರರು ಇದ್ದರು.
BY : ಭೀಮಣ್ಣ ಗಾಣಿಗೇರ, ಇಳಕಲ್ಲ





