Photographer attacked in Sakleshpur, ಸಕಲೇಶಪುರದಲ್ಲಿ ಪೋಟೋಗ್ರಾಫರ್ ಮೇಲೆ ಹಲ್ಲೆಇಳಕಲ್ ತಾಲೂಕಾ ಛಾಯಾಚಿತ್ರ ಸಮೂಹ ಖಂಡನೆ
ಇಳಕಲ್ : ಸಕಲೇಶ್ವರಪುರದ ಬೆಟ್ಟದ ಬೈರವೇಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಪೋಟೋಶೂಟ್ ಮಾಡುವ ವೇಳೆಯಲ್ಲಿ ಸ್ಥಳೀಯ ವ್ಯಕ್ತಿಗಳು ಫೋಟೋಗ್ರಾಫರ್ ಮೇಲೆ ಹಲ್ಲೆಯನ್ನು ನಡೆಸಿರುವದನ್ನು ಇಳಕಲ್ಲ ತಾಲೂಕಾ ಛಾಯಾಚಿತ್ರ ಸಮೂಹದ ಸಂಸ್ಥೆಯ ಪದಾಧಿಕಾರಿಗಳು ತೀವ್ರವಾಗಿ ಖಡಿಸಿದ್ದಾರೆ. ಛಾಯಾಚಿತ್ರ ಸಮೂಹದ ಅಧ್ಯಕ್ಷ ಮುನಿಸ್ವಾಮಿ ದೇವಾಂಗಮಠ ಮಾತನಾಡಿ ಸ್ಥಳೀಯ ಪುಡಾಂಡಿಗಳು ಪೋಟೋಗ್ರಾಫ್ರಗಳ ಮೇಲೆ ಮನಸ್ಸೋ ಇಚ್ಚೆ ಥಳಿಸಿದಲ್ಲದೇ, ೬ ಲಕ್ಷ ರೂ ಮೌಲ್ಯದ ಕ್ಯಾಮೆರಾ ವಸ್ತುಗಳನ್ನು ಧ್ವಂಸ ಮಾಡಿ, ಬಂಗಾರದ ಚೈನ ರಾಬರಿ ಮಾಡಿ ಗೂಂಡಾವರ್ತನೆ ತೋರಿಸಿದ್ದಾರೆ. ಆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣಕ್ರಮ ಕೈಗೊಳ್ಳಬೇಕು, ಮತ್ತು ಹಾನಿಯಾಗಿರುವ ಕ್ಯಾಮರಾಗಳ ವೆಚ್ಚವನ್ನು ಅವರಿಂದಲೇ ಭರಿಸಬೇಕು, ಇಲ್ಲವಾದಲ್ಲಿ ಛಾಯಾಚಿತ್ರ ಸಮೂಹದಿಂದ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸಲಾಗುವದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ, ಇಳಕಲ್ಲ





