Manasa Pre-University Science College ಮಾನಸಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
ಇಳಕಲ್ : ಗಿಡ ಬೆಳೆಸಿ, ಜೀವ ಉಳಿಸಿ ಕೇವಲ ಸಸಿಗಳನ್ನು ನೆಡುವುದಷ್ಟೇ ನಮ್ಮ ಜವಾಬ್ದಾರಿಯಲ್ಲ, ಅವುಗಳನ್ನು ಮರವಾಗುವವರೆಗೆ ಪೋಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಮಾನಸಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್.ಗಾಣಿಗೇರ ಹೇಳಿದರು.
ಇಲ್ಲಿನ ತೊಂಡಿಹಾಳ ಸಮೀಪದ ಮಾನಸಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದ ಅವರು “ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಇಂದಿನ ಜಾಗತಿಕ ತಾಪಮಾನದ ದಿನಗಳಲ್ಲಿ ಹಸಿರನ್ನು ಉಳಿಸುವುದು ಕೇವಲ ಆಚರಣೆಯಾಗದೆ ನಿತ್ಯದ ಬದುಕಿನ ಭಾಗವಾಗಬೇಕು ಎಂದರು.
ಉಪನ್ಯಾಸಕ ಪಿ.ಎಸ್.ಕಂದಗಲ್ಲ ಮಾತನಾಡಿ ಮನೆಯ ಆವರಣದ ಮುಂದೆ ಗಿಡಗಳನ್ನು ಬೆಳೆಸಿ ದಿನನಿತ್ಯ ಅವುಗಳಿಗೆ ನೀರು ಹಾಕಿ ಪೋಷಣೆ ಮಾಡಬೇಕು ಮುಂದೆ ಅದು ನಿಮ್ಮಗೆ ನೆರಳು ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಮಯದಲ್ಲಿ ಎಸ್.ಎ.ಮೇಟಿ ಹಾಗೂ ಕಾಲೇಜಿನ ಇನ್ನಿತರ ಭೋಧಕ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)






