
Yathindra gets DCM post and Kashappa gets ministerial post: ಯತೀಂದ್ರಗೆ ಡಿಸಿಎಂ ಸ್ಥಾನ ಕಾಶಪ್ಪನವರಗೆ ಸಚಿವ ಸ್ಥಾನ ನೀಡಿ : ಶರಣು ಇದ್ದಲಗಿ ಒತ್ತಾಯ
ಇಳಕಲ್ : ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಗೆ ಸಚಿವ ಸ್ಥಾನ ನೀಡಬೇಕು ಎಂದು ಹಾಲುಮತ ಸಮಾಜದ ಯುವ ಮುಖಂಡ, ಕಾಂಗ್ರೆಸ್ ಯುವ ನಾಯಕ ಶರಣು ಇದ್ದಲಗಿ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಅಪಾರವಾಗಿದ್ದು, ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿ ಹೈಕಮಾಂಡ್ಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಸಿಎಂ ಸ್ಥಾನದಿಂದ ಕೆಳಗಿ ಇಳಿದಿದ್ದರಿಂದ ನÀಮ್ಮ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದ್ದು, ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ದುಡಿದಿದೆ.
ಶಾಸಕ ಕಾಶಪ್ಪನವರ ಲಿಂಗಾಯತ ಸಮಾಜದ ಪ್ರಭಾವಿ ಮುಖಂಡರಾಗಿದ್ದು, ಮತ್ತು ಬಾಗಲಕೋಟೆಯಲ್ಲಿ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಪಟ್ಟಿದ್ದಾರೆ. ಶಾಸಕರಿಗೆ ಸಚಿವ ಸ್ಥಾನ ನೀಡಿದರೇ, ಬಾಗಲಕೋಟ ಜಿಲ್ಲೆ ಸೇರಿದಂತೆ ಹುನಗುಂದ ಮತಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಹೊಂದಲಿದೆ.
ಶಾಸಕ ಕಾಶಪ್ಪನವರು ಯುವ ಶಾಸಕರಾಗಿದ್ದು, ಎಲ್ಲಾ ಸಮಾಜದ ಜನರೊಂದಿಗೆ ಒಡಾನಾಟವನ್ನು ಹೊಂದಿದ್ದು, ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಸಿಎಂ ಡಿ,ಕೆ,ಶಿವಕುಮಾರ, ಸಿದ್ದರಾಮಯ್ಯ ಮತ್ತು ಹೈಕಮಾಂಡ್ಗೆ ಅವರು ಒತ್ತಾಯಿಸಿದ್ದಾರೆ. ವರದಿ: ಭೀಮಣ್ಣ ಗಾಣಿಗೇರ





