struck 5 lakh compensation cheque distributed ಸಿಡಿಲು ಬಡಿದು ಮಹಿಳೆ ಸಾವು ೫ ಲಕ್ಷ ರೂ ಪರಿಹಾರದ ಚೆಕ್ ವಿತರಣೆ
ಇಳಕಲ್ಲ : ತಾಲೂಕಿನ ವಜ್ಜಲ ಗ್ರಾಮದ ರೈತ ಮಹಿಳೆ ಶಾಂತವ್ವ ವಾಲಿಕಾರ ಹೊಲದಲ್ಲಿ ಕೃಷಿ
ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದರಿಂದ ಸರಕಾರದ ವತಿಯಿಂದ
೫ ಲಕ್ಷ ರೂ ಪರಿಹಾರದ ಚೆಕ್ನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಶಾಸಕ ವಿಜಯಾನಂದ
ಕಾಶಪ್ಪನವರ ಮಹಿಳೆಯ ಕುಟುಂಬಸ್ಥರಿಗೆ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಅಮರೇಶ ಪಮ್ಮಾರ ಹಾಗೂ ವಜ್ಜಲ ಗ್ರಾಮದ ಹಿರಿಯರು ಇದ್ದರು.
ವರದಿ: ಭೀಮಣ್ಣ ಗಾಣಿಗೇರ






